You are currently viewing Bellary Lok Sabha 08 constituencies details

Bellary Lok Sabha 08 constituencies details

ಲೋಕಸಭೆ ಚುನಾವಣೆ-2024ರ ಅಂಗವಾಗಿ ಎರಡು ಹಂತದ ಚುನಾವಣೆಯು ಘೋಷಣೆಯಾಗಿದ್ದು, ಜಿಲ್ಲೆಯಲ್ಲಿ (ಮಾ.16 ರಿಂದ) ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. 09-ಬಳ್ಳಾರಿ (ಪ.ಪಂ) ಲೋಕಸಭೆ ಕ್ಷೇತ್ರದ ಚುನಾವಣೆಯು ಎರಡನೇಯ ಹಂತದಲ್ಲಿ ಮೇ 07 ರಂದು ಮತದಾನ ಮತ್ತು ಜೂ.04 ರಂದು ಮತಎಣಿಕೆ ನಡೆಯಲಿದ್ದು, ನ್ಯಾಯ ಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತವು ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.


ಲೋಕಸಭೆ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರದಂದು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.


ಲೋಕಸಭೆ ಸಾರ್ವತ್ರಿಕ ಚುನಾವಣಾ ವೇಳಾಪಟ್ಟಿಯಂತೆ 2024ರ ಏಪ್ರಿಲ್ 12 (ಶುಕ್ರವಾರ) ಅಧಿಸೂಚನೆ ಹೊರಡಿಸುವುದು. ನಾಮಪತ್ರ ಸಲ್ಲಿಸಲು ಏಪ್ರಿಲ್ 19ರ ಶುಕ್ರವಾರ ಕೊನೆಯ ದಿನಾಂಕವಾಗಿದ್ದು, ಏಪ್ರಿಲ್ 20ರ ಶನಿವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 22ರ ಸೋಮವಾರ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, 2024ರ ಮೇ 07 ರ ಮಂಗಳವಾರ ಮತದಾನ ದಿನ, ಜೂನ್ 04ರ ಮಂಗಳವಾರ ಮತ ಎಣಿಕೆ ಹಾಗೂ 06-05-2024ರ ಗುರುವಾರದಂದು ಸಂಪೂರ್ಣ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಬೇಕಾದ ದಿನಾಂಕವಾಗಿದೆ ಎಂದು ಹೇಳಿದರು.


ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 08 ಮತಕ್ಷೇತ್ರ:
09-ಬಳ್ಳಾರಿ (ಪ.ಪಂ) ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 08 ವಿಧಾನಸಭಾ ಕ್ಷೇತ್ರಗಳಿವೆ.
04 ಪರಿಶಿಷ್ಟ ಪಂಗಡ ಮೀಸಲು ಮತಕ್ಷೇತ್ರಗಳು: 91-ಕಂಪ್ಲಿ, 93-ಬಳ್ಳಾರಿ, 95-ಸಂಡೂರು ಹಾಗೂ 96-ಕೂಡ್ಲಿಗಿ.
02 ಪರಿಶಿಷ್ಟ ಜಾತಿ ಮೀಸಲು ಮತಕ್ಷೇತ್ರಗಳು: 88-ಹಡಗಲಿ ಹಾಗೂ 89-ಹಗರಿಬೊಮ್ಮನಹಳ್ಳಿ.
02 ಸಾಮಾನ್ಯ ಮೀಸಲು ಮತಕ್ಷೇತ್ರಗಳು: 90-ವಿಜಯನಗರ ಹಾಗೂ 94-ಬಳ್ಳಾರಿ ನಗರ ಕ್ಷೇತ್ರ.
ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1865341 ಮತದಾರರು, 1972 ಮತಕೇಂದ್ರಗಳು:
09-ಬಳ್ಳಾರಿ (ಪ.ಪಂ) ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು 1865341 ಮತದಾರರಿದ್ದಾರೆ. 920022 ಪುರುಷ ಮತದಾರರು, 945053 ಮಹಿಳೆ ಮತದಾರರು ಹಾಗೂ 266 ಇತರೆ ಅಲ್ಪಸಂಖ್ಯಾತ ಲಿಂಗತ್ವ ಮತದಾರರು ಇದ್ದಾರೆ. ಒಟ್ಟು 1972 ಮತಕೇಂದ್ರಗಳಿವೆ ಎಂದು ಮಾಹಿತಿ ನೀಡಿದರು.
ಕ್ಷೇತ್ರವಾರು ಮತದಾರರು:
88-ಹಡಗಲಿ: 98232 ಪುರುಷ ಮತದಾರರು, 96714 ಮಹಿಳೆ ಮತದಾರರು, 13 ಇತರೆ, ಒಟ್ಟು 194959 ಮತದಾರರು ಹಾಗೂ 218 ಮತಕೇಂದ್ರಗಳು.
89-ಹಗರಿಬೊಮ್ಮನಹಳ್ಳಿ: 116933 ಪುರುಷ ಮತದಾರರು, 118592 ಮಹಿಳೆ ಮತದಾರರು, 22 ಇತರೆ, ಒಟ್ಟು 235547 ಮತದಾರರು ಹಾಗೂ 254 ಮತಕೇಂದ್ರಗಳು.
90-ವಿಜಯನಗರ: 124655 ಪುರುಷ, 132416 ಮಹಿಳೆ, 77 ಇತರೆ, ಒಟ್ಟು 257148 ಮತದಾರರು ಹಾಗೂ 259 ಮತಕೇಂದ್ರಗಳು.
91-ಕಂಪ್ಲಿ: 109490 ಪುರುಷ, 112295 ಮಹಿಳೆ, 35 ಇತರೆ, ಒಟ್ಟು 221820 ಮತದಾರರು ಹಾಗೂ 242 ಮತಕೇಂದ್ರಗಳು.
93-ಬಳ್ಳಾರಿ: 120046 ಪುರುಷ, 127417 ಮಹಿಳೆ, 50 ಇತರೆ, ಒಟ್ಟು 247513 ಮತದಾರರು ಹಾಗೂ 235 ಮತಕೇಂದ್ರಗಳು.
94-ಬಳ್ಳಾರಿ ನಗರ: 130315 ಪುರುಷ, 139045 ಮಹಿಳೆ, 33 ಇತರೆ, ಒಟ್ಟು 269393 ಮತದಾರರು ಹಾಗೂ 261 ಮತಕೇಂದ್ರಗಳು.
95-ಸಂಡೂರು: 114928 ಪುರುಷ, 115309 ಮಹಿಳೆ, 25 ಇತರೆ, ಒಟ್ಟು 230262 ಮತದಾರರು ಹಾಗೂ 253 ಮತಕೇಂದ್ರ.
96-ಕೂಡ್ಲಿಗಿ: 105423 ಪುರುಷ, 103265 ಮಹಿಳೆ, 11 ಇತರೆ, ಒಟ್ಟು 208699 ಮತದಾರರು ಹಾಗೂ 250 ಮತಕೇಂದ್ರಗಳು.
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ವರ್ಗವಾರು ಮತದಾರರ ವಿವರ:
ಬಳ್ಳಾರಿ ಲೋಕಸಭಾ ಕ್ಷೇತ್ರದ 08 ಮತಕ್ಷೇತ್ರದಲ್ಲಿ 53169 ಯುವ ಮತದಾರರು, 24841 ವಿಶೇಷಚೇತನ ಮತದಾರರು ಮತ್ತು 13285 ಜನ 85 ವರ್ಷ ಮೇಲ್ಪಟ್ಟ ವಯಸ್ಕ ಮತದಾರರರಿದ್ದಾರೆ.

Leave a Reply